ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಪರಂಪರೆಯ ಪ್ರಖ್ಯಾತ ಭಾಗವತ - ಪ್ರಾಚಾರ್ಯ ಕೆ.ಪಿ. ಹೆಗಡೆ

ಲೇಖಕರು :
ಮಹೇಶ್. ಕೆ. ಎಸ್. ಕೇಡಲಸರ
ಬುಧವಾರ, ಆಗಸ್ಟ್ 14 , 2013

ಕೆ. ಪಿ.ಹೆಗಡೆ (ಕೃಷ್ಣ ಪರಮೇಶ್ವರ ಹೆಗಡೆ) ಗೊಳುಗೊಡು ಇವರು ಬಡಗು ತಿಟ್ಟು ಯಕ್ಷಗಾನದ ನಾರಣಪ್ಪ ಉಪ್ಪೂರರ ಪರಂಪರೆಯ ಪ್ರಖ್ಯಾತ ಭಾಗವತರಲ್ಲಿ ಒಬ್ಬರು.ನಾರಣಪ್ಪ ಉಪ್ಪೂರರ ಪದ್ಯಗಳನ್ನು ಪ್ರಸಕ್ತ ಕಾಲದಲ್ಲಿ ಪುನರ್ ನೆನಪಿಸುವ ಧಾರೆಶ್ವರರ ಸಾಲಿನಲ್ಲಿ ಸೇರುವ ಭಾಗವತರು. ಈಗ ಮಂದಾರ್ತಿ ಮೆಳದಲ್ಲಿ ಪ್ರಧಾನ ಭಾಗವತರಾಗಿರುವ ಇವರು ಮಂದಾರ್ತಿ ಯಕ್ಷಗಾನ ಕೇಂದ್ರದಲ್ಲಿ ಗುರುಗಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕೋಟ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದಾರೆ. ಕೋಟ ಹಂಗಾರಕಟ್ಟೆಯ ಭಾಗವತಿಕೆ ತರಬೇತಿ ಕೇಂದ್ರದಲ್ಲಿ ದೀರ್ಘಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನೂರಾರು ಯುವ ಭಾಗವತರಿಗೆ ತರಬೇತಿ ನೀಡಿದ್ದಾರೆ.

ಬಾಲ್ಯ , ಶಿಕ್ಷಣ

ಬಡಗು ತಿಟ್ಟು ಯಕ್ಷಗಾನದ ಸಂಪ್ರದಾಯಿಕ ಭಾಗವತರೆಂದೇ ಪ್ರಸಿದ್ದರಾದವರು ಪ್ರಾಚಾರ್ಯ ಕೆ.ಪಿ. ಹೆಗಡೆ (ಕೃಷ್ಣ ಪರಮೇಶ್ವರ ಹೆಗಡೆ).ಇವರು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮೂರೂರು ಗ್ರಾಮದ ಗೋಳಗೊಡಿನಲ್ಲಿ 13-07-1959 ರಂದು ದಿ.ಪರಮೇಶ್ವರ ಹೆಗಡೆ ಮತ್ತು ತುಂಗಭದ್ರ ದಂಪತಿಗಳ ಏಳು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದರು. ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಬಾಲ್ಯದಲ್ಲಿ ಐನಬೈಲ್ ಗಣಪತಿ ಹೆಗಡೆಯವರ ಮನೆಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ಬಳಿ ತಾಳಾಭ್ಯಾಸ ಮಾಡಿದರು.

ಹತ್ತನೆಯ ತರಗತಿವಗೆ ವಿದ್ಯಭ್ಹಾಸ ಮಾಡಿದ ನಂತರ ಯಕ್ಷಗಾನ ಭಾಗವತಿಕೆಯ ಬಗ್ಗೆ ಒಲವಿದ್ದ ಇವರು 1977ರಲ್ಲಿ ಹಂಗಾರಕಟ್ಟೆಯ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಸುಮಾರು ಹತ್ತು ವರ್ಷಗಳ ಕಾಲ ಪ್ರಾಚಾರ್ಯ ದಿ. ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದರು. ಬಡಗು ತಿಟ್ಟು ಯಕ್ಷಗಾನದ ಪ್ರಸಿದ್ದ ಭಾಗವತ ಸುಬ್ರಮಣ್ಯ ಧಾರೇಶ್ವರರು ಇವರ ಸಹಪಾಠಿ.

ಕಲಾಸೇವೆ

1979ರಲ್ಲಿ ಶ್ರೀಕ್ಷೇತ್ರ ಮಂದಾರ್ತಿ ಮೇಳದಲ್ಲಿ ಸಂಗೀತಗಾರರಾಗಿ ಯಕ್ಷಗಾನದ ವೃತ್ತಿ ಆರಂಭಿಸಿದ ಕೆ.ಪಿ.ಹೆಗಡೆಯವರು ಸತತ 34 ವರ್ಷಗಳ ತಿರುಗಾಟದಲ್ಲಿ ಮೂಲ್ಕಿಮೇಳ, ಹಿರೇಮಹಾಲಿಂಗೆಶ್ವರ ಮೇಳ, ಪೆರ್ಡೂರು, ಕುಮಟಾ, ಪಂಚಲಿಂಗೇಶ್ವರ, ಶಿರಸಿ, ಸಾಲಿಗ್ರಾಮ, ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ಶ್ರೀಕ್ಷೇತ್ರ ಮಂದಾರ್ತಿ ಮೇಳದ ಪ್ರಧಾನ ಭಾಗವತರು.

22 ವರ್ಷಗಳ ಕಾಲ ಹಂಗಾರಕಟ್ಟೆಯ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿದ್ದು ಪ್ರಸ್ತುತ ಶ್ರೀಕ್ಷೇತ್ರ ಮಂದಾರ್ತಿ ಕೇಂದ್ರದಲ್ಲಿ ಗುರುಗಳಾಗಿದ್ದಾರೆ. ಹಲವಾರು ಶಿಷ್ಯಂದಿರಿಗೆ ತರಬೇತಿ ಕೊಟ್ಟು ವ್ಯವಸಾಯಿ ಮೇಳಗಳಲ್ಲಿ ಉತ್ತಮ ಭಾಗವತರನ್ನಾಗಿಸಿದ್ದಾರೆ. ಕೊಳಗಿ ಕೇಶವ ಹೆಗಡೆ, ನಾರಾಯಣ ಶಬರಾಯ, ಕಿಗ್ಗ ಹಿರಿಯಣ್ಣಾಚಾರ್ಯ, ಸುರೇಶ್ ಶೆಟ್ಟಿ, ಉಮೇಶ್ ಸುವರ್ಣ, ರವೀಂದ್ರ ಭಟ್ ಅಚವೆ, ಸರ್ವೇಶ್ವರ ಹೆಗೆಡೆ, ಲಂಬೋದರೆ ಹೆಗಡೆ ಇವರ ಶಿಷ್ಯವರ್ಗದಲ್ಲಿ ಪ್ರಮುಖರು.

ಕೆ.ಪಿ. ಹೆಗಡೆ
ಜನನ : ಜುಲೈ 7, 1959
ಜನನ ಸ್ಥಳ : ಗೋಳಗೋಡು
ಸಿದ್ದಾಪುರ (ತಾ)
ಉತ್ತರ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ : ಪ್ರಸ್ತುತ ಮಂದರ್ತಿ ಮೇಳದಲ್ಲಿ ಭಾಗವತರಾಗಿದ್ದು, ಮೂಲ್ಕಿಮೇಳ, ಹಿರೇಮಹಾಲಿಂಗೆಶ್ವರ ಮೇಳ, ಪೆರ್ಡೂರು, ಕುಮಟಾ, ಪಂಚಲಿಂಗೇಶ್ವರ, ಶಿರಸಿ, ಸಾಲಿಗ್ರಾಮ, ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು:
ಹಲಾವಾರು ಸ೦ಘ-ಸ೦ಸ್ಥೆಗಳಿ೦ದ ವಿವಿಧ ಪ್ರಶಸ್ತಿಗಳು
ಪ್ರಸ್ತುತ ಮಂದರ್ತಿ ಮೇಳದಲ್ಲಿ ಭಾಗವತರಾಗಿದ್ದು, ಮೂಲ್ಕಿಮೇಳ, ಹಿರೇಮಹಾಲಿಂಗೆಶ್ವರ ಮೇಳ, ಪೆರ್ಡೂರು, ಕುಮಟಾ, ಪಂಚಲಿಂಗೇಶ್ವರ, ಶಿರಸಿ, ಸಾಲಿಗ್ರಾಮ, ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕೆ.ಪಿ.ಹೆಗಡೆಯವರ ಕಲಾಸೇವೆ ಇನ್ನೂ ಹೆಚ್ಚುಕಾಲ ಯಕ್ಷಗಾನಕ್ಕೆ ದೊರಕಲಿ ಎಂಬುದು ಕಲಾಭಿಮಾನಿಗಳಾದ ನಮ್ಮೆಲ್ಲರ ಆಶಯ.



ಶ್ರೀ ಕೆ.ಪಿ.ಹೆಗಡೆ ಹಾಗೂ ಗೋಪಾಲ ಗಾಣಿಗ , ಹೆರ೦ಜಾಲು




ಈ ಲೇಖನಕ್ಕೆ ಸ೦ಪೂರ್ಣ ವಿವರಗಳು ಲಭ್ಯವಾಗಿಲ್ಲ. ಆಸಕ್ತರು ಯಾವುದೇ ಮೌಲ್ಯಯುತ ಮಾಹಿತಿಗಳನ್ನು ಕಳುಹಿಸಬೇಕಾಗಿ ವಿನ೦ತಿ.

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಸತೀಶ್ ನಾಯಕ್ (www.bayalata.com)(9/14/2013)
ಮು೦ದಿನ ದಿನಗಳಲ್ಲಿ ಎಲ್ಲಾ ಭಾಗವತರ ಹಾಡುಗಳನ್ನು ಪ್ರಕಟಿಸಲಾಗುವುದು.
Sampath(9/13/2013)
Ivara padya upload maadi e site ge...




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ